Saturday, 23 May 2009

ತ-ಗಾದೆ : ಅಡಗಿದ ಕುಂಬಾರನ ಹರುಷ

ಕುಂಬಾರನಿಗೆ ವರುಷ
ಸಂತೆಯಲಿ ಮಾರಲದನ
ಬೇಕು ನೂರು ವರುಷ
ಅಡಗಿತದರಲ್ಲಿ ಅವನ ಹರುಷ

ನಿಜ ಮಾನವ

ಮಾನವನ
ಅವಮಾನವನ
ಮಾಡುವದಬಿಟ್ಟು
ಅವಮಾನವನಾದ

ಮಾನವ ನವಮಾನ ಮಾಡದವ ಮಾನವ :)

ಪರದೇಶಿ ಸೊಳ್ಳೆ

ಸೊಳ್ಳೆ ಇರದ
ನಾಡಿಗೂ ತಪ್ಪಿಲ್ಲ
ಸೊಳ್ಳೆ ಪರದೇಶಿ ಕಾಟ

No(ವಿನ) Response

ಭಾವಿ ಮಾವನಿಗೆ ಕೊಟ್ಟೆ ಪತ್ರ, ಕೊಡು ಪುತ್ರಿ ಯನ್ನ
ಪ್ರಭಾವಿ ಮಾವನ ಉತ್ರದಿ ಕಂಡೆ ಬರಿ ಭಾವಿ ಯನ್ನ

ಬಡವ ಕಂಡ ಒಡವಿ

ಒಡವಿ ಒಡವಿ
ಎಂದೇಕ ಕಾಡುವಿ

ಬಿಡು ನಮಗ್ಯಾಕ
ಅದರ ಗೊಡವಿ

ನಿನ್ನ ಈ ಮೊಗಕ
ದೇವರಿತ್ತ ಮೊಡವಿ

ನನ್ನ ಕಂಗಳಿಗವ
ಸುಂದರ ಒಡವಿ

Friday, 15 May 2009

ನನ್ನ ಅಡಿಗೆ[ಯ] ಪ್ರಾರಂಭ -ಈ ಝುಣಕ ದಿಂದ

ತಿಂದೆ ನೀ ಮಾಡಿದಾ ಅಡಿಗೆ,
ಅಂದೇ ಶುರುವಾಯಿತೆನ್ನ ಅಡಿಗೆ ;-) :-)

Wednesday, 14 January 2009

ಸಂಕ್ರಾಂತಿ ಆಗಲಿ some ಕ್ರಾಂತಿ ಗೆ ನಾಂದಿ

ಕೆಲವೊಮ್ಮೆ ಬರಿ ಬೇವು
ಕೆಲವೊಮ್ಮೆ ಎಲ್ಲಾ ಬೆಲ್ಲ
ಕೆಲವೊಮ್ಮೆ ಗೀಳು ಗೋಳು

ಕೆಲವೊಮ್ಮೆ ಬೇವು ಬೆಲ್ಲ
ಕೆಲವೊಮ್ಮೆ ಏಳು ಬೀಳು
ಕೆಲವೊಮ್ಮೆ ಎಳ್ಳು ಬೆಲ್ಲ

ಹೌದಲ್ಲವೇ ಮನದ ಭ್ರಾಂತಿ
ಓಡಿಸುವದೂ ಒಂದು ಕ್ರಾಂತಿ

ಕೇವಲವಲ್ಲದೆನ್ನ ಮಾತಿನ ರೀತಿಯ ನೀತಿಯ
ನೀ ತಿಳಿ ತಲೆ ಯಲ್ಲಿ ತಳೆ (ದರೆ)
ಏಳು ನೂರು ಕಾಲ ಬಾಳು

ಈ ಶುಭ ದಿನದಿ ಹಾರೈಸುವೆ
ಆಗಿ ದುಃಖದ ಉತ್ಕ್ರಾಂತಿ
ಶುಭತರುತಿರಲಿ ತಮಗೆ
ಈ ಮಕರ ಸಂಕ್ರಾಂತಿ

Friday, 2 January 2009

ನಿಯಂತ್ರಣ

ರೂಮು ಉಸಿರು
ಹವಾ ನಿಯಂತ್ರಿತ

ಉಪ್ಪಿಟ್ಟು ಶಿರಾ
ರವಾ ನಿಯಂತ್ರಿತ

ಹಾಡು ಕವನ
ಕವಿ ನಿಯಂತ್ರಿತ !!

ಹೊಸ ವರುಷಕೆ ಹಾರೈಸುವೆ ಶುಭಾಶಯ


ಪ್ರತಿ ವರುಷ ಬರುತಿರಲಿ
ಹೀಗೆ ಹೊಸ ವರುಷ

ಪ್ರತಿ ಕ್ಷಣವೂ ತರುತಿರಲಿ
ಹಿಗ್ಗು ಸಂತಸ ಹರುಷ

ಪ್ರತಿ ಇಷ್ಟವು ಫಲಿಸಿ
ಆಗುತಿರಲಿ ಅಭಿವೃಧಿ ಅಭಿಷ್ಟಸಿದ್ಧಿ

ಪ್ರತಿ ಸಂಕಟ ಶಮಿಸಿ
ಆವರಿಸಿರಲಿಮನ ಸದಾ ಸುಖಾಸನ

ಪ್ರಗತಿಪಥದೆಡೆ ಪಯಣ ಸಾಗುತಿರಲಿ
ನಿಲ್ಲದೆ ನಿರಂತರ ಈ ಅಭಿಯಾನ

Tuesday, 23 December 2008

ಸೋತ ಸೋಲಿಗ

ಸಾಲದ
ಸಾಲಕೆ
ಸೋಕಿದ
ಸೋಲಿಗ

ಸಾಲಲಿ
ಸಾವಿನ
ಶೂಲಕೆ
ಶೋಷಿತ

ಸೋಲುತ
ನೋವಲಿ
ಸಾಗಿದ
ಸಾಲಿಗ

Sunday, 21 December 2008

ಪುಟ್ಟ ಪ್ರೇಮ ಅಟ್ಟಿ ಕಾಣು ದಟ್ಟ ಸ್ನೇಹ

puttya this one for u :)

ಅಳಿಸಿದರೆ
ಆಗುಹೋಗದ
ಅಳಿಸುವ
ಅಳುವ ಪ್ರೇಮ
ಉಳಿವುದು
ಅಳಿಯದ
ಅಮರ ಸ್ನೇಹ

Thursday, 11 December 2008

ಕನ್ನಡಕ ಆಗುವ ಅವಮಾನ ತಡೆ ಓ ಕನ್ನಡಕಂದ

ಕನ್ನಡಕಂ
ಇಂದ ನೀ ನಿಂದ-
ನೆ , ಕನ್ನಡಕ
ಅವಮಾನ
ಮಾಡೋರ ನಡಕ
ನಾಕು ತದುಕಿ
ತರದಿದ್ದರ ನಡಕ
ತರಬೇಕಾದೀತು
ನಾಳಿ ಕನ್ನದನಾಡಲ
ಕನ್ನಡಕಲಿತವರ
ಹುಡುಕಲು ಕನ್ನಡಕ

Tuesday, 9 December 2008

ಕನ್ನಡ ದ ಕನ್ನ ಕೆ ಕಾರಣ ನಮ್ಮ ರಾಜ ಕಾರಣ

ಕನ್ನಡಕಾಯತೀ-
ರಿ ಎಂದು ಆರಿಸಿದರೆ
ಮಾಡಿದಿರಿ
ಕನ್ನಡದ
ಕನ್ನ ಡಕಾಯತಿ

Monday, 8 December 2008

ಕನ್ನಡ (ದ) ಕಲಿ

ಆಗುವ ಮೊದಲು
ಕನ್ನಡಕಾಗಿ ಕೈ ಎತ್ತಿ
ನೀ ಕನ್ನಡದ ಕಲಿ
ಸರಿಯಾಗಿ
ಕನ್ನಡ ಕಲಿ

ಕಲಿತು
ಕನ್ನಡದ ಕಲಿ
ಆಗದಿದ್ದರೂ ಸರಿ
ಆಗದಿರು
ಕನ್ನಡಕೆ ಕಲಿ

Friday, 5 December 2008

ತಂಗಿ ನೀನಿರು ಮನಸಲ್ಲಿ ಸದಾ ತಂಗಿ

ನೆಚ್ಚಿನ ತಂಗಿ ನನ್ನ ಮೆಚ್ಚಿನ ತಂಗಿ
ಹಚ್ಚಿಯ ಹಂಗಿ ನನ್ನ ಮನ್ಸಲ್ಲಿ ಇಂಗಿ
ತಂಗಿರು ಹಿಂಗಿ ನನ್ನ ನೆಂಪಲ್ಲಿ ತಂಗಿ

ಮಾತಿಗ ನಿಂತರ ನೀ ನಿರಂತರ
ಅಳಾಕ ಕುಂತರ ನೀ ನೀರಪೂರ
ಅಳು ನಿಂತು ನಿನ್ನಾ ಮಾತೂ ಕುಂತರ
ನಂಗಾದಿನ ಪೂರ ಬೇಜಾರ ಬೇಜಾರ |ನೆಚ್ಚಿನ|


ನಂಗೊತ್ತು ನಿನ್ನಳುಮಾತು ಬಿಳಿಯ ಕರ್ಪೂರ
ಬೆಳಗೀದ ಅದರಿಂದಾ ದೂರಿನ ಗುಡಿಗೋಪುರ
ಬೆಳಗಾತು ನಗುವಿಂದಾ ಬೆಳಕ ಉರ್ಪೂರ
ನಗತಾ ಇರು ಹಿಂಗ ಇನ್ ನೀ ಜೀವನ್ಪೂರ|ನೆಚ್ಚಿನ|

ಬುಕ್ಕ ಕಂಡರ ನೀ ಹಾವಂಗ ಓಡತಿ
ಹಾವ ಕಂಡರ ನೀ ಜೀವನ ಬೀಡತಿ
ಜಿರಲಿ ಕಂಡರ ನೀ ಚಿಟ್ಟಂತ ಚೀರತಿ
ಗುಡುಗ ಕೇಳಿರ ನೀ ಗಡಗಡ ನಡ್ಗತಿ |ನೆಚ್ಚಿನ|

ಪೊರಿ ಕಳಚಿನ್ನ ನೀ ಅತ್ತಿಮನಿ ಹೊಗಾಕಿ
ಹಾವನ್ನ ಚಿವಟ ನೀ ಹಾಕದನ ಹೊಸಕಿ
ಜಿರಲಿನ ಗಿವಚ ನೀ ಕೈಲಿಡದ ಪೊರಕಿ
ಗುಡುಗಿಗ ಬುಕ್ಕೊದಿ ನೀ ಹೊಡಸದಕ ಗೊರಕಿ |ನೆಚ್ಚಿನ|


ಉಂಡಾಡಿಕೊಂಡಿದ್ದಾಗ ನಾ ಕೊಂಡಾಡಲಿಲ್ಲ
ಕುಣಿದಾಡಿದಾಗಲೂ ನೀ ನಾ ಕಿವಿಗೊಡಲಿಲ್ಲ
ಕಿರಿಕಿರಿ ಮಾಡಿ ಬರಿ ಗೊಳೋಯ್ದೆನಲ್ಲ
ಅರಿವಿಲ್ಲದ ಮಾಡಿದ್ದನ ಮರಿತಿ ಹೊದಿಲ್ಲ |ನೆಚ್ಚಿನ|

ನೆನಪಾದಾಗನಸ್ತದ ನಾ ಹೆಂಗಿದ್ದೆನಲ್ಲ
ನಂದ ಗುಂಗಲಿ ಎಲ್ಲ ಮರೆತಿದ್ದೆನಲ್ಲ
ಅಂದಿತ್ತು ಹುಡುಗಾಟದ ಬುದ್ಧಿ ನಂದಿತ್ತು ನಂಗ್ ಬೇಜಾರಿಲ್ಲ
ಬುದ್ಧಿ ಬಂದಾಗಿಂತರ ನಾ ಎಲ್ಲೂ ಎಡವಿಲ್ಲಲ್ಲ |ನೆಚ್ಚಿನ|

ನಿನಗಾಗಿ ನಾನಂತೂ ಏನು ಮಾಡಿಲ್ಲ
ಚಿಂತಿತ್ತು ನಂಗ ಯಾರೋ ಆದರ ನಿನ್ನಲ್ಲ
ಕಣ್ಣಾಗ ಕಣ್ಣಿಟ್ಟು ನಿನ್ನ ಸಾಕವ ಸಿಕ್ಕನಲ್ಲ
ನಲಿತಿದ್ರ ಹಿಂಗ ನೀ ಸಾಕ ಸಿಗ್ತ ನನಗೆಲ್ಲ |ನೆಚ್ಚಿನ|

ಇರಬಹುದು ನಾನೂರು ಊರೂರು ದೂರ
ಬರಾಕು ದಿನದಿನಾ ನಾನಿರಬಹುದು ದೀನ
ನೆನಪಾದಾಗರಿ ನನ್ನ ಮನ್ಸಾಗ ಜೋರಾಗ
ಬರತೆನಿ ನಾನೋಡಿ ನೀನೋಡುದ್ರಾಗ ನಿನ್ನೆನಪಿನಾಗ |ನೆಚ್ಚಿನ|

ದುರದೂರೊಂಟ್ಯಂತ ಚಿಂತಿ ಬೇಕಿಲ್ಲ
ನಾಹೆಂತಾವಂತ ನಿಂಗ ಗೊತ್ತಲ್ಲ
ನಾನೆಲ್ಲೂ ಇರಲಿ ನಿನ್ನ ಮರೆಯೋಲ್ಲ
ದೂರ ನಾ ಇದ್ದರು ಮನಸು ಕೇಳ್ಬೇಕಲ್ಲ |ನೆಚ್ಚಿನ|

Tuesday, 2 December 2008

[ ನನ್ನಾಕೆ ] ಇಂದು ಅಂದು ಇಂದು

ನನ್ನ
ಹುಡುಗಿ
ಇಂದು
ಅಂದು


ಅಂದದ
ಸುಂದರ
ಕೋಮಲ
ವದನೆ

ಇಂದಿಗೆ
ನನಗೆ
ಇಂದಿಗೆ

ಮದುವೆ
ಆಗಿ
ಬರೀ
೨ ವರುಷ

ಆಗಲೇ
ಅವಳು
ಬೆಳೆದ
ಬದನೆ

Monday, 1 December 2008

ಆತಂಕ ವಾದ ಆತಂಕವಾದ

ಜನಕೆ ಆತಂಕ ವಾದ
ಉಗ್ರನ ಆತಂಕವಾದ
ಕೆಳಿಸದೇಕಾತಗೆ ಆದ
ಮನುಕುಲದ ಆರ್ತನಾದ

ಪರರ ಆಕ್ರಮಿಸುವ
ಪರದೇಶಿಯ ಪರಾಕ್ರಮ
ಆಕ್ರಮದ ಆಕ್ರಮಣ
ಮಾಡೋಡಿಹೊರಟ ಹೇಡಿಗೇನರಿವು
ಹೊರಟ ಹೊರಟವರ ಆಕ್ರಂದನ

ಅಂತ್ಯ ಮಾಡಿ ಅಂತ್ಯವಾಗೋ
ದೆಂಥ ಅಂಧ ವಾದ
ಅಂತ ವಿಲ್ಲ ಅಂತ್ಯವಾಗೋ
ವರೆಗೀ ಮೂಢ ವೇದ

ವಕ್ರರ ಅಟ್ಟಹಾಸದ ಈಕ್ರಮ
ಮಂದವಾಗಿಸಿ ಮಟ್ಟಹಾಕಲು ಬರಲೇ ಬೇಕು
ನಾಡಿಗಾಗಿ ತಾ ಮಾಡಿ ಧಮನಿ ರಕ್ತದ ವಿಕ್ರಯ
ಮುಂದ ದೇಶದ ಪ್ರತಿ ತ್ರಿವಿಕ್ರಮ

Sunday, 30 November 2008

ವಿಧಿಯಾಟ

ಪಕ್ಕದಾಗಲ್ಲಿಯಲ್ಲಿ
ದೊಂಬರಾಟ
ಹುಡುಗಿಲಗಾಟಿ
ಜನಕೇಕಿಗಲಾಟಿ

ಕುಣಿದುಮಂಗಗಳಾಟ
ಕಂಡೂಕಂಡೂಮಗುಗೋಳಾಟ
ದೊಂಬನನಗೀಗಿಲೀಟ

ಅಗುಳಿಗಾಗಿಓಟ
ಅಳುನನಗೆನೋಡಿ
ವಿಧಿಯಾಡುವಾಟ

Saturday, 29 November 2008

pachya

ನನ್ನ ಹೆಸರು ನೆಚ್ಚ-
ಗೆಳೆಯರಿಗೆ ಪಚ್ಯ
ಕೆಲವರಿಗೆ /[ಕೇವಲರಿಗೆ?!] ನಾ ಅಪಚ್ಯ

ನಮ್ಮ ನಿರು ಪಕಿ

ಇಲ್ಲ್ಯಾರು ಇಲ್ಲ
ನಿರು ತರ ನಿರು ಪಕಿ

ನೇರಖಾರದ ಪ್ರಶ್ನೆ ಗೆ
ಇಲ್ಲ ಪ್ರತ್ಯುತ್ತರ

ಎದುರಿರಲು ನಿರು ಆಗುವರೇಕೆ ಪ್ರತಿಯೊಬ್ಬರೂ
ಎದುರಿಸಲು ನೀರು ನೀರು, ನಿರುತ್ತರ

ಆದರೂ ಯಾಕೆ
ಯಾರಿಲ್ಲ ನಿರು ಪರ

ಹಿಂಡರಕಿ

ಕುಡಿಯಾಕ ಕೋಕ್ ಜೊತೆ
ತಿನ್ನಾಕ ಖುಷಿನ ನಂಗ
ಹುರಿದ ಶೇಂಗ

ಆದ್ರುನು ಹಂಗ ಹೆದರಿಕಿ
ಬಂದರ ಮೇಲಿಂದಮೇಲೆ ಡರಕಿ ಜೊತೆ
ಹಿಂದಾಗಾಷಿ ಹಿಂದಾಗಡಷಿ ಹಿಂಡ ಹಿಂಡ ಹಶಿ ಹಿಂಡರಕಿ !!

ನನ್ನಾ ಬನ ವಾಸಿ

ಧಾರವಾಡ
ಹೋಗಿದ್ದೆ
ನೋಡಿದೆ
ಹುಬ್ಬಳ್ಳಿ

ಅನಿಸಿದೆ
ಇಂದು ಅದಕಿಂತ
ಈ ಹೂಬಳ್ಳಿ ವಾಸಿ

ಸಿರ್ಸಿಗೆ
ಹೋಗಿದ್ದೆ
ನೋಡಿದೆ
ಬನವಾಸಿ

ಅನಿಸಿತೆ-
ನಗೆನೋ
ಅದಕಿಂತ
ತಮ್ಮ
ಚುಂ-
ಬನವಾಸಿ

ಅದಕೆ
ಸದಾ
ನಾ
ತಮ್ಮ
ಬನ ವಾಸಿ

Friday, 28 November 2008

ಜೀ ವನ ವಾಸ ನೆ

ಜೀವನದ ಸಹವಾಸ
ಬೇಡವಾಗುವುದು ವನವಾಸ

ಜೀವನದ ಜೋಕಾಲಿ
ಜೋಕಾಗದಿರಲಿ

ಜೀಕುತ್ತ ಜೀಕುತ್ತ ಹೀಗೇ
ಸದಾ ತೂಗುತ್ತಲಿರಲಿ

ನಾ ಬರೆ ದ ಬರ ಹ ಕೆ ಬರ ದು ಬರ

ಕೇಳಿದರೇಕೆ ಈ ಪರಿ ನೀ ಬರೆ
ವೆ ಹೇಳುವೆ ನಾ ಬರೆ ಬರೆ
ನನ್ನದೇ ಬೇರೆ ಬರೆ
ಹೇಳಿದರಾರೋ ಬರೋ ಬರೆ
ಕೆಲವರಿಯರಿಗೆ ಬರೇ ಬರೆ
ಕೆಲವರಿಗದೇ ಭಾರಿ ಬರೆ

ಹೇಳುತಿಲ್ಲ ನಾ ಬರೆ ಬರೆ
ಯಾರು ನಿಲ್ಲಿಸಲ್ಲ ನನ್ನ ಬರೆ ಬರೆ
ನನ್ನ ಬರಹಕಿಲ್ಲಾರು ಬರಾ ಬರ
ಅದಕ ಬರಾಕಿಲ್ಲರಿ ಎಂದು ಬರ
ಆದರ ಅದನ ಓದದೆ ಇಲ್ಲಿ ಬರ

muted TeaM pLayer / pLeader!!

ಟೀಮಿನಲ್ಲಿ ತಾ
ಸದಾ ಜ್ಞಾನ ಪ್ರೇಷಕ
ಮೂಕ ಪ್ರೇಕ್ಷಕನಿಂದ
ಮಾತು ಬರುವುದು ಮಾತ್ರ
ಪ್ರತಿ ಪಾಕ್ಷಿಕ

ನಿದ್ದೆ

ಕಳಿಸಲಾರದೇ
ಆ-ಕೆಯನ್ನ
ನಾ
ಕೊನೆಗೆ
ಆ-ಕಳಿಸಿ
ಕಳಿಸಿದೆ

ಸ್ನೇ-ಹಿತ

ಸ್ನೇಹಿತ
ನಿದ್ದರೆ
ಸನ್ನಿಹಿತ
ಮನಕೇನೋ
ಒಂಥರಾ
ಹಿತ

ಓ ಮರೆಯದ ಗೆಳೆಯರೇ ಈಸಾಲು ನಿಮಗಾಗಿ

ಮನನೊಂದು
ದಿನಗಳೆಯದಿರೆ
ನೆನಪಾಗುವರೆನ್ನ
ಗೆಳೆಯಂದಿರೆ

ಮರೆಯದ ಮರೆಯಾದವರ
ಮರೆಯಂದರೆ
ಮರೆಯುವೆ
ಹೆಟ್ಟಿ ಮರೆಯಂದವನ

someವೇದನೆ!

ವದನೆ
ಕಂಡರೆ
ಏನೋ
ಸಂವೇದನೆ
ಕಾಣದಿರೆ
ಬರೀ
ವೇದನೆ

ಅಳುವುದೋ ನಗುವುದೋ

ಶೆಲ್ಲಿ ಜೋಕು
ಕೇಳಿದ
ಮೇಲೆ
ಹೇಳಿದವ
ಅಳಬೇಕು

ಸಹೋದ್ಯೋಗಿ ಶೆಲ್ಲಿ

ಪಕ್ಕದಲ್ಲಿ
ಶೆಲ್ಲಿ
ಮನವೆಲ್ಲ
ಅಲ್ಲಿ ;)

ಪ್ರಾಣೇಶ್ ರ ಪ್ರತಿ ಹೊಳೆವ ಹಳೆ ಜೋಕು !

ಪ್ರಾಣೇಶ್ ಆಚಾರ್ಯರ ಜೋಕಿನ ಪ್ರತೀ ಹನಿ
ಗೊಳಗುಮ್ಮಟದಲ್ಲಾಗುವ ಪ್ರತಿಧ್ವನಿ

ಜೋಕೆ ಉಳಿದತಿಂಡಿ ಉಳಿದುತಿಂದೀ

ನಿನ್ನೆ ಮಾಡುಳಿದ
ಅರ್ಧ ವಡಾಪಾವನ
ತಿಂದವನ
ಹೊಟ್ಟೆ
ಎರಡು ದಿನ
ಪೂರ ಪಾವನ

ಆಸನದ ಆರ್ಭಟ
ಬಚ್ಚಲಿಗೆ ಸದಾ
ನಿಲ್ಲದ ಪ್ರಾಶನ !!

ಕುಡುಕ ನ ನಡುಕ

ಎಲ್ಲಾದರೂ ಇರು
ಎಂತಾದರು ಇರು
ಎಂದೆಂದಿಗೂ ನೀ ಕಣ್ಣ ಕುಡಿಯದಿರು
ಕುಡಿದರೂ ಕುಡಿದು ಕುಡಿದು
ನೀ ಅಲ್ಲಾಡದಿರು !

ಜಾಹೀರಾತು

ಬಣ್ಣದ ಜಾಹೀರಾತು
ನೋಡಿ ತಂದ
ಬಣ್ಣದ ತಿಂಡಿಯ
ಬಣ್ಣ ಬಯಲಾಯ್ತು
ತಿಂದು ನೋಡಿ
ಮುಖದ ಬಣ್ಣ ಬದಲಾಯ್ತು
ಹೊಟ್ಟೆ ಬಟಾ ಬಯಲಾಯ್ತು
ಬಚ್ಚಲಲ್ಲಿ ಆದಿನವೇ
ಅದು ಜಾಹಿರ ವಾಯ್ತು

ಎಚ್ಚರ ನೀನಾಗು ಎಚ್ಚರ

ನಿಲ್ದಾಣದಲಿ ಕಾಯುವ
ಬದಲು
ಬರ-
ಬರದ ಬಸ್ಸಿಗೆ
ಟೀವೀ ನೋಡುತ್ತ ಆದರೆ
ಆನಂದ ಪರವಶ
ಆಗುವುದು ಲಗೇಜು
ಆನಂದದಿ ಪರರ ವಶ !

ಸ್ವಲ್ಪ ನಿಧಾನ

ವೇಗ ನಿಯಂತ್ರಕ ನೋಡಿ
ಬೇಗ ನಿಯಂತ್ರಿಸದಿರೆ
ವಾಹನ
ಕಾಣುವುದು ನಿನ್ನ
ಆಸನ
ಆಸ್ಪತ್ರೆಯ ವಾರ್ಡ್.ನ !

ಬೆರಕಿ ಕಲಿ

ಮುನ್ಜಾನಿ ಮುನ್ಜಾನಿ
ಪಕ್ಕಾ ದಂಗ್ಡಿ ಹೊರ್ಗ ಬೆರಕಿ
ಹಕ್ಕಿ
ಕಲರವ
ಪಕ್ಕಾ ಮಂದಿದ್ ಒಳಗ ಕಲಬೆರಕಿ
ಹೆಕ್ಕಿ ಕಲ್ಲ-ರವ !

ಪದಗಳಲಿ ಅವಿತೆ ಏಕೆ ನೀ ಕವಿ-ತೆ

ಕರಾಳ ರಾತ್ರಿಯಲಿ
ಕಗ್ಗತ್ತಲ
ಕಾಡಿನಲಿ
ಕಾರ್ಮೋಡ
ಕವಿದರೂ
ಕವಿ ಹೃದಯ
ಕಂಡದ್ದೇ
ಕವಿತೆ

ಇಲಿಯ ಬೋನಲ್ಲಿ ಸಿಕ್ಕ ಬೆಕ್ಕು

ಪಾಷಾಣ ತಿಂದರೂ
ಇಲಿ
ಬಚಾವ್
ಏಕೆ ಅಂತೀರಾ ?
"ಕಲಬೆರಿಕೆ"
ಪಾಷಾಣ ತಿಂದ ಇಲಿಯ
ಕೊಂದು ತಿಂದ
ಬೆಕ್ಕು
ಗೊಟಕ್
ಹೇಗೆ ಅಂತೀರಾ ?
"ಫುಡ್ ಪೋಇಸೋನಿಂಗ್"

ಇಲ್ಲಿ ಇಲಿ ಬೆಕ್ಕು

ಕಾರ್ಟೂನ್ ನೆಟ್-ವರ್ಕ್ ನಲ್ಲಿ
ಟಾಮ್ ಅಂಡ್ ಜೆರಿ
ನೋಡಿದ
ಜನರಿಗೆ
ಭಾರಿ
ಸಂತಸ
ಯಾಕೆಂದರೆ ಅಲ್ಲಿ
ಇಲಿಗೆ ಆಟ
ಬೆಕ್ಕಿಗೆ
ಪ್ರಾಣ ಸಂಕಟ

ನನ್ ಹಾಲತ್

ಹಿಟ್ಟ್ ಗಿಟ್ಟ್ ತಿಂದ್
ನಾ ಅದೇನಿ ಗಟ್ಟ್-ಮುಟ್ಟ್.
ಕೆಲ್ಸಾ ಮೂಲ್ಯಾಗ್ ಅಟ್ಟಿ-ಬಿಟ್ಟ್
ಮಾಡಾಖತೆನಿ ಟ್ರಿಪ್ ಮ್ಯಾಲ್ ಟ್ರಿಪ್
ಆಕ್ಕಿರ್ತದ ಹೋದ ಕಡೆ
ಎಲ್ಲ ನಿಮಗೋಳದ ನೆನಪ್
ವಾಪಸ್ ಬಂದ್
ನಿಮನ್ ನೋಡಾಕ್
ಕಾಯಾಖತೆನಿ with ಫುಲ್ ಹುರಪ್

ನನ್ನಮ್ಮ

ನನ್ನಮ್ಮನಮ್ಮ ನೀ ನನ್ನಮ್ಮನಮ್ಮ
ನೀನಂದ್ರೆ ನಂಗೆ, ಬಲು ಹೆಮ್ಮೆಯಮ್ಮ

ಆಗಿದ್ರು ಸುಸ್ತು
ಕೇಳಿದ್ದಕೊಟ್ಟು
ಹೇಳ್ತೀ ನಿ ಅಸ್ಟೂಕು ಅಯ್ತಾಯ್ತು ಅಸ್ತು||ನನ್ನಮ್ಮ||

ಇದ್ದರೂ ಇಸ್ಟೇ
ಮಾಡದೆ ಸಿಟ್ಟು
ತಿನ್ಸ್ತಿನಿ ಹೊಟ್ಟೆ ಗೆರಡೋತ್ತು ತುತ್ತು||ನನ್ನಮ್ಮ||

ಇದ್ದಾಸೆ ಅಸ್ಟು
ಮರೆಮಾಚಿ ವಸ್ಟು
ನಗ್ತಿ ನೀ ನಂಗೆ ಕಚ್ಗುಳಿ ಯಿಟ್ಟು||ನನ್ನಮ್ಮ||

ಕಸ್ಟಾವ ಕಟ್ಟಿ
ರೊಟ್ಟಿಯ ತಟ್ಟಿ
ಕೊಡ್ತಿ ನೀ ಬೆನ್ತಟ್ಟಿ ಕೈಯಾಗ ತಟ್ಟಿ||ನನ್ನಮ್ಮ||

ನಿಂಗ್ಸೇರುತಿದ್ರು
ತಂಗುಳ್ನ ತಿಂದ್ರು
ಬಡ್ಸತಿ ನಿ ನಂಗ್ಮಾಡಿ ಬಿಸಿ ಬಿಸಿದೆನ್ರು||ನನ್ನಮ್ಮ||
ಮನ್ಯಾಗಿನ್ ಸಾಮಾನು
ಎಲ್ಲೊ ಒಗೆದಿದ್ರು
ಹುಡ್ಕ್ಯಾಡ್ಕೊಂಡ್ ತರ್ತಿ ನೀ ನಾ ಕೇಳದಿದ್ರು||ನನ್ನಮ್ಮ||

ನನ್ನ ಅಭಿ ಪ್ರಾಯ

ಮದೋನ್ಮತ್ತ ಪ್ರಾಯದ ಚಿತ್ತ
ಮಾಡಿದ ಯಃಕಶ್ಚಿತ್
ಚಿಕ್ಕ ತಪ್ಪಿಗೂ
ಇಲ್ಲಿ ಪ್ರಾಯಶಃ ಇಲ್ಲ ಪ್ರಾಯಶ್ಚಿತ್ತ?